ನಮ್ಮ ಬಗ್ಗೆ
ಒಂದು ಉತ್ತಮ ಜಗತ್ತನ್ನು ಸೃಷ್ಟಿಸಲು ಹೊರಟಿರುವ ಉತ್ಸಾಹಿಗಳ ತಂಡ
ಬೆಂಗಳೂರಿನಲ್ಲಿ ನೆಲೆಸಿರುವ ನಾವು ಕೃಷಿ, ತಂತ್ರಜ್ಞಾನ ಮತ್ತು ವ್ಯಾಪಾರವನ್ನು ಒಂದುಗೂಡಿಸುವ ಕೆಲಸ ಮಾಡುತ್ತೇವೆ. ನಮ್ಮ ಗುರಿ ಹಳ್ಳಿಯ ರೈತರು ಬೆಳೆದ ಬೆಳೆಯನ್ನು ಜಗತ್ತಿನ ಮಾರುಕಟ್ಟೆಗೆ ತಲುಪಿಸುವುದು. ನಾವು ರೈತ ಉತ್ಪಾದಕ ಸಂಸ್ಥೆಗಳಿಗೆ (FPO) ಬೆನ್ನೆಲುಬಾಗಿ ನಿಂತು, ಅವುಗಳು ಕೇವಲ ಗುಂಪುಗಳಾಗಿ ಉಳಿಯದೆ ಆಧುನಿಕ ತಂತ್ರಜ್ಞಾನದ ಕಂಪನಿಗಳಾಗಿ ಬೆಳೆಯಲು ಸಹಾಯ ಮಾಡುತ್ತೇವೆ.
ಬೆಳೆಯ ಸಂಶೋಧನೆಯಿಂದ ಹಿಡಿದು, ಅದನ್ನು ಸಂಸ್ಕರಿಸಿ ಮಾರುಕಟ್ಟೆಗೆ ತಲುಪಿಸುವವರೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ನಾವು ಸಿದ್ಧಪಡಿಸುತ್ತೇವೆ. ಸಣ್ಣ ಉದ್ದಿಮೆಗಳು, ವಿಜ್ಞಾನಿಗಳು ಮತ್ತು ದೊಡ್ಡ ವ್ಯಾಪಾರಿಗಳನ್ನು ನಮ್ಮ ಡಿಜಿಟಲ್ ವೇದಿಕೆಯ ಮೂಲಕ ಒಂದುಗೂಡಿಸುತ್ತೇವೆ. "ಮಣ್ಣಿನಿಂದ ಮಳಿಗೆಯವರೆಗೆ" (Soil to Shelf) ನಡೆಯುವ ಪ್ರತಿಯೊಂದು ವ್ಯವಹಾರವೂ ಪಾರದರ್ಶಕವಾಗಿ ಮತ್ತು ಲಾಭದಾಯಕವಾಗಿರುವಂತೆ ನಾವು ನೋಡಿಕೊಳ್ಳುತ್ತೇವೆ.
ಇಂದಿನ ಕೃಷಿ ವ್ಯವಸ್ಥೆಯಲ್ಲಿ ಸಣ್ಣ ರೈತರು ಮತ್ತು ಸಂಘಗಳು ಶೋಷಣೆಗೆ ಒಳಗಾಗುತ್ತಿವೆ. ನಾವು ಈ ಅನ್ಯಾಯವನ್ನು ಸರಿಪಡಿಸಲು ಬಂದಿದ್ದೇವೆ. ರೈತರಿಗೆ ಸರಿಯಾದ ಸಾಧನ ಮತ್ತು ಮಾರುಕಟ್ಟೆ ಸಂಪರ್ಕ ನೀಡುವ ಮೂಲಕ, ಅವರನ್ನು ಬರೀ 'ಬೆಳೆಗಾರ'ರನ್ನಾಗಿ ಮಾಡದೆ ಆರ್ಥಿಕವಾಗಿ ಪ್ರಬಲರಾದ 'ಭಾಗಿದಾರ'ರನ್ನಾಗಿ (Prosumer) ಮಾಡುವುದು ನಮ್ಮ ಆಶಯ.
ನಾವು ನಮ್ಮ ನಿಮ್ಮ ಭವಿಷ್ಯವನ್ನು ಕಾಣುವುದು ಹೀಗೆ
ನಮ್ಮ ಕನಸು (Vision)
ರೈತರ ಶೋಷಣೆಯಿಲ್ಲದ ಜಗತ್ತನ್ನು ನಿರ್ಮಿಸುವುದು ಮತ್ತು ಪ್ರತಿ ರೈತ ಸಂಘವೂ ಗುಣಮಟ್ಟದಲ್ಲಿ ಜಾಗತಿಕ ಮಟ್ಟದ ನಾಯಕನಾಗುವಂತೆ ಮಾಡುವುದು.
ನಮ್ಮ ಗುರಿ (Mission)
ಸಂಶೋಧನೆ, ಸಂಸ್ಕರಣೆ ಮತ್ತು ವ್ಯಾಪಾರವನ್ನು ಒಳಗೊಂಡ ಡಿಜಿಟಲ್ ವೇದಿಕೆಯನ್ನು ಒದಗಿಸುವ ಮೂಲಕ ರೈತ ಸಮುದಾಯದ ಸುಸ್ಥಿರ ಏಳಿಗೆಯನ್ನು ಖಚಿತಪಡಿಸುವುದು.
ನಾವು ಮಾಡುತ್ತಿರುವ ಕೆಲಸಗಳು!
ಸ್ವಾವಲಂಬನೆ
FPO ನಾಯಕರು ತಮ್ಮ ವ್ಯವಹಾರವನ್ನು ತಾವೇ ಸ್ವತಂತ್ರವಾಗಿ ನಡೆಸುವಂತೆ ತರಬೇತಿ ನೀಡುವುದು.
ವ್ಯಾಪ್ತಿಯ ವಿಸ್ತರಣೆ
ಕೇವಲ ಕಚ್ಚಾ ಬೆಳೆಗಳ ಬದಲಾಗಿ ವಿದೇಶಿ ಮಾರುಕಟ್ಟೆಗಳಿಗೆ ಬೇಕಾದ ರೀತಿಯಲ್ಲಿ ಬೆಳೆಗಳನ್ನು ಸಂಸ್ಕರಿಸಿ ಹೆಚ್ಚಿನ ಬೆಲೆಗೆ ರಫ್ತು ಮಾಡುವ ಗುರಿ ಹೊಂದಿದ್ದೇವೆ..ಹೆಚ್ಚಿನ ಆದಾಯ
ನೇರ ಮಾರುಕಟ್ಟೆ ಮತ್ತು ಮೌಲ್ಯವರ್ಧನೆಯ ಮೂಲಕ ರೈತರ ನಿವ್ವಳ ಆದಾಯವನ್ನು ಕನಿಷ್ಠ 30% ರಷ್ಟು ಹೆಚ್ಚಿಸುವುದು.
ಆಧುನಿಕ ತಂತ್ರಜ್ಞಾನ
ನಮ್ಮ ಇಡೀ ಜಾಲದಲ್ಲಿ ಬೆಳೆಯ ಪಾರದರ್ಶಕತೆಗಾಗಿ 'ಬ್ಲಾಕ್‌ಚೈನ್' ಮತ್ತು ರೈತರಿಗೆ ನೆರವಾಗಲು 'ಎಐ' (AI) ಆಧಾರಿತ ಬೆಳೆ ಸಲಹೆಗಳನ್ನು ನೀಡುವುದು.
ಡಿಜಿಟಲ್ ಕ್ರಾಂತಿ
1,000 ಕ್ಕೂ ಹೆಚ್ಚು ರೈತ ಸಂಘಗಳನ್ನು ಡಿಜಿಟಲ್ ಮಾಡಿ ಅವರಿಗೆ ಜಾಗತಿಕ ಗುರುತು ನೀಡುವುದು.
ಇದು ನಿಮಗೇಕೆ ಮುಖ್ಯ
ಕೆಲಸದಲ್ಲಿ ಪ್ರಾಮಾಣಿಕತೆ
ನಾವು ಮಾಡುವ ಪ್ರತಿಯೊಂದು ಕೆಲಸವೂ ಪಾರದರ್ಶಕವಾಗಿದ್ದು, ನಿಮ್ಮ ಬೆಳೆಗಳಿಗೆ ಜಾಗತಿಕ ಮಟ್ಟದ ಬೆಲೆ ಮತ್ತು ಗೌರವ ಸಿಗುವಂತೆ ಮಾಡುತ್ತೇವೆ.
ವಿಜ್ಞಾನಿಗಳಿಂದ ಹಿಡಿದು ಲಾರಿ ಚಾಲಕರವರೆಗೆ ಎಲ್ಲರ ಶಕ್ತಿಯನ್ನು ಬಳಸಿ ಉತ್ತಮ ಫಲಿತಾಂಶ ಪಡೆಯುವುದು.
ಜಂಟಿ ನಾವೀನ್ಯತೆ
ನ್ಯಾಯಯುತ ಬೆಳವಣಿಗೆ
ನಾವು ಶೋಷಣಾತ್ಮಕ ವ್ಯವಸ್ಥೆಯನ್ನು ವಿರೋಧಿಸುತ್ತೇವೆ. FPO ಗಳು ಬೆಳೆದಾಗ ಮಾತ್ರ ನಮ್ಮ ಯಶಸ್ಸು ಸಾಧ್ಯ ಎಂದು ನಾವು ನಂಬುತ್ತೇವೆ.
ಸಮಾನ ಅವಕಾಶ
ನಮ್ಮ ವ್ಯವಸ್ಥೆಯು ಅತ್ಯಂತ ಸಣ್ಣ ರೈತನಿಗೂ ಮುಕ್ತವಾಗಿದೆ. ಡಿಜಿಟಲ್ ಸ್ಪರ್ಧೆಯಲ್ಲಿ ಯಾರೂ ಹಿಂದೆ ಉಳಿಯಬಾರದು ಎಂಬುದು ನಮ್ಮ ಆಶಯ.
ಪಾರದರ್ಶಕತೆ
"ಮಣ್ಣಿನಿಂದ ಮಳಿಗೆಯವರೆಗೆ" ಅಂದರೆ ಬಿತ್ತನೆಯಿಂದ ಮಾರಾಟದವರೆಗೆ ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆ ಮತ್ತು ಸರಿಯಾದ ಬೆಲೆಯನ್ನು ಕಾಪಾಡುವುದು.
ಸ್ಥಾಪಕರ ಸಂದೇಶ
Srinath Rao TG
Founder, NaFDEc
ಕೃಷಿಗೆ ಬೇಕಿರುವುದು ಬರೀ ಒಳ್ಳೆಯ ಬೀಜ ಅಥವಾ ವೇಗದ ಟ್ರಾಕ್ಟರ್ ಮಾತ್ರವಲ್ಲ - ಅದಕ್ಕೊಂದು ನ್ಯಾಯಯುತ ವ್ಯವಸ್ಥೆ ಬೇಕು!
ದಶಕಗಳಿಂದ ಭಾರತದ ರೈತರು ಕಷ್ಟಪಡುತ್ತಿದ್ದರೂ ಮಾರುಕಟ್ಟೆಯ ತೊಂದರೆಗಳಿಂದಾಗಿ ಹಿಂದುಳಿದಿದ್ದಾರೆ. ನಾನು NaFDEc ಸ್ಥಾಪಿಸಿದಾಗ ನನ್ನ ಗುರಿ ಸ್ಪಷ್ಟವಾಗಿತ್ತು: ಕೃಷಿಯ ಸಮಸ್ಯೆಗಳನ್ನು ಬಿಡಿಬಿಡಿಯಾಗಿ ನೋಡದೆ, ಎಲ್ಲವನ್ನೂ ಒಳಗೊಂಡ ಒಂದು ವ್ಯವಸ್ಥೆಯನ್ನಾಗಿ ಸುಧಾರಿಸುವುದು.
ನಾವು ಕೇವಲ ಸಾಫ್ಟ್‌ವೇರ್ ನೀಡಿ ಸುಮ್ಮನಾಗುವುದಿಲ್ಲ. ಸಂಶೋಧನೆ, ಸಂಸ್ಕರಣೆ ಮತ್ತು ಜಾಗತಿಕ ವ್ಯಾಪಾರಿಗಳನ್ನು ಒಂದೇ ವೇದಿಕೆಗೆ ತರುತ್ತೇವೆ. ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಪ್ರತಿಫಲ ಪಡೆಯುವಂತಾಗಬೇಕು. ಹಳ್ಳಿಯಿಂದ ಜಗತ್ತಿಗೆ ಸೇತುವೆಯನ್ನು ನಿರ್ಮಿಸುವ ನಮ್ಮ ಈ ಪ್ರಯಾಣದಲ್ಲಿ ನೀವೂ ಜೊತೆಯಾಗಿ.