Skip to Content

NaFDEc ಜೊತೆ ಕೈಜೋಡಿಸಿ. ನಿಮ್ಮ ರೈತ ಉತ್ಪಾದಕರ ಕಂಪೆನಿಯನ್ನು ಗಟ್ಟಿಯಾಗಿಸಿ, ಹೆಚ್ಚಿನ ಲಾಭ ಪಡೆಯಿರಿ.

ಆನ್‌ಲೈನ್ ವ್ಯಾಪಾರ, ಸುಲಭ ಕೆಲಸದ ವ್ಯವಸ್ಥೆ ಮತ್ತು ನೇರ ಮಾರುಕಟ್ಟೆ ಸಂಪರ್ಕದ ಮೂಲಕ ರೈತರ ಬದುಕನ್ನು ಹಸನಾಗಿಸುವ ಒಂದು ಸರಳ ವೇದಿಕೆ.

ರೈತ ಉತ್ಪಾದಕರ ಕಂಪೆನಿಗಳ ರಾಷ್ಟ್ರೀಯ ಡಿಜಿಟಲ್ ವೇದಿಕೆ

ಸಮಗ್ರ ಪರಿಹಾರ. ಸುಲಭ ತಂತ್ರಜ್ಞಾನ. ನಿಮ್ಮ ಸಹಕಾರದೊಂದಿಗೆ

ರೈತ ಉತ್ಪಾದಕರ ಕಂಪೆನಿ (FPO) ಗಳು ಎದುರಿಸುವ ನಿಜವಾದ ಸಮಸ್ಯೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಬಗೆಹರಿಸಿ, ನಿಮ್ಮ ಸಂಘವು ವೇಗವಾಗಿ ಬೆಳೆಯುವಂತೆ ಮಾಡುವುದೇ ನಮ್ಮ ಗುರಿ.

ನಾವು ಬಗೆಹರಿಸುವ ಸಮಸ್ಯೆಗಳು 

 ಲಾಭ ಹೆಚ್ಚಿಸುವುದು: ನಿಮ್ಮ ರೈತ ಸಂಘದ ಆದಾಯ ಮತ್ತು ಲಾಭವನ್ನು ಹೆಚ್ಚು ಮಾಡುವುದು.
 ಕೆಲಸಗಳನ್ನು ಸುಲಭಗೊಳಿಸುವುದು: ಕಾಗದದ ಕೆಲಸಗಳನ್ನು ಕಡಿಮೆ ಮಾಡಿ, ಸಂಘದ ಎಲ್ಲಾ ವ್ಯವಹಾರಗಳನ್ನು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ವೇಗವಾಗಿ ನಡೆಯುವಂತೆ ಮಾಡುವುದು.
 ನಿಮ್ಮದೇ ಭಾಷೆಯಲ್ಲಿ ಬೆಳೆ ಸಲಹೆ: ಬೆಳೆಗಳ ಬಗ್ಗೆ ಸರಿಯಾದ ಮಾಹಿತಿ ಮತ್ತು ತಜ್ಞರ ಸಲಹೆಯನ್ನು ನಿಮ್ಮದೇ ಕನ್ನಡ ಭಾಷೆಯಲ್ಲಿ ಸುಲಭವಾಗಿ ಪಡೆಯುವುದು.
 ವ್ಯವಹಾರದಲ್ಲಿ ನಂಬಿಕೆ ಮತ್ತು ಪಾರದರ್ಶಕತೆ: ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಬಳಸಿ ವ್ಯಾವಹಾರಿಕ ಪಾರದರ್ಶಕತೆಯನ್ನು ತಂದು, ನಂಬಿಕೆ ಬೆಳೆಸುವುದು.
ಇಂದೇ ನೊಂದಾಯಿಸಿ 

✽  ಸೌಲಭ್ಯಗಳು

ನಮ್ಮ ವೇದಿಕೆಗಳು

1

FPO ಗಳ  ಡಿಜಿಟಲ್ 
ಮಾರುಕಟ್ಟೆ 

ನಿಮ್ಮ FPOನ ಯಶಸ್ವಿ ವ್ಯಾಪಾರ ಕೇಂದ್ರವಾಗಿ ಬದಲಾಯಿಸಿ. ನಮ್ಮ ಈ ಕಾಮರ್ಸ್ ಮಾರುಕಟ್ಟೆಯ ಮೂಲಕ ಖರೀದಿ ಮತ್ತು ಮಾರಾಟ ಮಾಡಿ. ನಿಮ್ಮ ಬೆಳೆಯನ್ನ ದೊಡ್ಡ ಮಟ್ಟದಲ್ಲಿ ಮಾರುವುದು ಇರಲಿ, ಬಿತ್ತನೆ ಬೀಜ ಮತ್ತು ಗೊಬ್ಬರ ಕೊಳ್ಳುವುದು ಇರಲಿ ಅಥವಾ ನಿಮ್ಮ ಸದಸ್ಯರಿಗೆ ಬೇಕಾದ ದಿನಸಿ ಸಾಮಾನುಗಳನ್ನು ತರಿಸುವುದು ಇರಲಿ - ಎಲ್ಲವನ್ನೂ ಒಂದೇ ಕಡೆ ಮಾಡಿ. ಲಾಭದ ಪೂರ್ಣ ಹಣ ನಿಮ್ಮ ಸಂಘದಲ್ಲೇ ಉಳಿಯುವಂತೆ ನೋಡಿಕೊಳ್ಳಿ.

ನಮ್ಮ ಮಾರುಕಟ್ಟೆಯ ಬಗ್ಗೆ ತಿಳಿಯಿರಿ

2

FPO ಕಾರ್ಯ ನಿರ್ವಹಣಾ ತಂತ್ರಜ್ಞಾನ

ದಪ್ಪ ರಿಜಿಸ್ಟರ್‌ಗಳು ಮತ್ತು ಕಾಗದ ಪತ್ರಗಳ ಬಗ್ಗೆ ಚಿಂತೆ ಬಿಡಿ. ನಮ್ಮ ಸುಲಭವಾದ ತಂತ್ರಜ್ಞಾನ ಬಳಸಿ ನಿಮ್ಮ FPO ಕೆಲಸಗಳನ್ನು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ನಿರ್ವಹಿಸಿ. ನಿಮ್ಮ ಸಂಘದ ಸದಸ್ಯರ ಪಟ್ಟಿ, ಗೋದಾಮಿನಲ್ಲಿರುವ ದಾಸ್ತಾನು ಮತ್ತು ಹಣಕಾಸಿನ ಲೆಕ್ಕಾಚಾರವನ್ನು ಡಿಜಿಟಲ್ ಆಗಿ ಇಟ್ಟುಕೊಳ್ಳಿ. ಯಾವುದೇ ತಲೆನೋವಿಲ್ಲದೆ ನಿಮ್ಮ ಆಫೀಸ್ ನ ವೇಗವಾಗಿ ನಡೆಸಿ. 

ನಿಮ್ಮ FPO ನ ಆಧುನೀಕರಿಸಿ

3

ಏ.ಐ ಆಧಾರಿತ 
ಬೆಳೆ ಸಲಹೆ

ನಿಮ್ಮದೇ ಭಾಷೆಯಲ್ಲಿ ನುರಿತ ಕೃಷಿ ಸಲಹೆಗಳನ್ನು ಪಡೆಯಿರಿ. ನಮ್ಮ ಡಿಜಿಟಲ್ ಸಹಾಯಕ ಯಂತ್ರಗಳು ನಿಮ್ಮ ಬೆಳೆಯ ಆರೋಗ್ಯ, ಹವಾಮಾನ ಮತ್ತು ಮಣ್ಣಿನ ಗುಣಕ್ಕೆ ತಕ್ಕಂತೆ ಮಾಹಿತಿ ನೀಡುತ್ತವೆ. ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ, ಹಂತ-ಹಂತವಾಗಿ ಸಲಹೆ ನೀಡುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ ಮತ್ತು ಉತ್ತಮ ಲಾಭ ಪಡೆಯಲು ಸಾಧ್ಯವಾಗುತ್ತದೆ.

ನಿಮ್ಮ ಕೃ. ಮೇ ಸಹಾಯಕರನ್ನು ಭೇಟಿ ಮಾಡಿ

4

ಏ.ಐ ಮತ್ತು ಬ್ಲಾಕ್ ಚೈನ್ ಪರಿಹಾರಗಳು 

 ನಿಮ್ಮ ಬೆಳೆ ಶ್ರೇಷ್ಠವಾದುದು ಎಂದು ಜಗತ್ತಿಗೆ ತೋರಿಸಿ. "ಮಣ್ಣಿನಿಂದ ಮಳಿಗೆಯವರೆಗೆ" (Soil-to-Shelf) ನಾವು ಬೆಳೆಯ ಪ್ರತಿಯೊಂದು ಹಂತವನ್ನೂ ಡಿಜಿಟಲ್ ರೂಪದಲ್ಲಿ ದಾಖಲಿಸುತ್ತೇವೆ. ಈ ಸಾಕ್ಷಿಯು ದೊಡ್ಡ ವ್ಯಾಪಾರಿಗಳಲ್ಲಿ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ನಿಮ್ಮ ಮೇಲೆ ಹೆಚ್ಚಿನ ನಂಬಿಕೆ ಮೂಡಿಸುತ್ತದೆ. ನಿಮ್ಮ ಬೆಳೆ ಎಷ್ಟು ಶುದ್ಧವಾಗಿದೆ ಎಂದು ಸಾಬೀತುಪಡಿಸಿದಾಗ, ನೀವು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು.

ಪರಿಹಾರಗಳ ಬಗ್ಗೆ ಜಾಸ್ತಿ ಮಾಹಿತಿ

✽  ನಮ್ಮ ಸೇವೆಗಳು

ನಿಮ್ಮ FPO ಯಶಸ್ಸಿಗೆ ನೀವು ನಾವು ಕೈ ಜೋಡಿಸೋಣವೇ?

ನಾವು ಕೇವಲ ತಂತ್ರಜ್ಞಾನವನ್ನಷ್ಟೇ ನೀಡುವುದಿಲ್ಲ, ಪ್ರತಿ ಹಂತದಲ್ಲೂ ನಿಮ್ಮ ಜೊತೆಗಾರರಾಗಿ ಕೆಲಸ ಮಾಡುತ್ತೇವೆ. ನಿಮ್ಮ ತಂಡಕ್ಕೆ ತರಬೇತಿ ನೀಡುವುದರಿಂದ ಹಿಡಿದು, ನಿಮ್ಮ ಮೊದಲ ದೊಡ್ಡ ವ್ಯಾಪಾರ ಮುಗಿಯುವವರೆಗೆ ನಮ್ಮ ತಜ್ಞರು ನಿಮ್ಮ ಜೊತೆಗಿರುತ್ತಾರೆ. ನಿಮ್ಮ ಸಂಘವು ಗಟ್ಟಿಯಾಗಿ, ಸ್ವತಂತ್ರವಾಗಿ ಮತ್ತು ಲಾಭದಾಯಕವಾಗಿ ಬೆಳೆಯುವವರೆಗೆ ನಾವು ನಿಮ್ಮ ಕೈಹಿಡಿದು ನಡೆಸುತ್ತೇವೆ.

ಎಫ್.ಪಿ.ಓ (FPO) ಅಕಾಡೆಮಿ: ವ್ಯವಹಾರವನ್ನು ಸಮರ್ಥವಾಗಿ ನಡೆಸಿ

ನಾವು ಕೇವಲ ಕಂಪ್ಯೂಟರ್ ಸಾಫ್ಟ್‌ವೇರ್ ನೀಡುವುದಿಲ್ಲ, ನಿಮ್ಮನ್ನು ವ್ಯವಹಾರದ ನಾಯಕರನ್ನಾಗಿ ಮಾಡುತ್ತೇವೆ. ಸಂಘವನ್ನು ಸರಿಯಾಗಿ ನಡೆಸುವುದು ಹೇಗೆ, ಹಣಕಾಸಿನ ಲೆಕ್ಕಾಚಾರ ಮಾಡುವುದು ಹೇಗೆ ಮತ್ತು ಆದಾಯ ಹೆಚ್ಚಿಸಲು ಹೊಸ ದಾರಿಗಳನ್ನು ಹುಡುಕುವುದು ಹೇಗೆ ಎಂದು ನಾವು ಕಲಿಸಿಕೊಡುತ್ತೇವೆ. ನೀವು ಯಾರ ಮೇಲೂ ಅವಲಂಬಿತರಾಗದೆ, ಆತ್ಮವಿಶ್ವಾಸದಿಂದ ಲಾಭದಾಯಕವಾಗಿ ನಿಮ್ಮ ಸಂಘವನ್ನು ನಡೆಸುವುದೇ ನಮ್ಮ ಮುಖ್ಯ ಉದ್ದೇಶ.

ಮಾರುಕಟ್ಟೆ ಸಂಪರ್ಕ: ಉತ್ತಮ ಬೆಲೆಗೆ ಒಂದು ಸೇತುವೆ

ನಿಮ್ಮ ಬೆಳೆಗೆ ಹೊಸ ಗ್ರಾಹಕರನ್ನು ಮತ್ತು ದೊಡ್ಡ ಮಾರುಕಟ್ಟೆಗಳನ್ನು ನಾವು ಹುಡುಕಿಕೊಡುತ್ತೇವೆ. ಅಷ್ಟೇ ಅಲ್ಲದೆ, ಬಂದಿರುವ ಬೇಡಿಕೆಗಳನ್ನು (Orders) ಯಾವುದೇ ಗೊಂದಲವಿಲ್ಲದೆ ನಮ್ಮ ಡಿಜಿಟಲ್ ಸಾಧನಗಳ ಮೂಲಕ ಸುಲಭವಾಗಿ ಪೂರೈಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ರಫ್ತು ಉತ್ತೇಜನ: ನಿಮ್ಮ ಬೆಳೆ ಜಗತ್ತಿಗೆ ತಲುಪಲಿ

ನಿಮ್ಮ ವ್ಯವಹಾರವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ನಾವು ಸಿದ್ಧತೆ ಮಾಡುತ್ತೇವೆ. ವಿದೇಶಿ ಗ್ರಾಹಕರನ್ನು ಹುಡುಕುವುದು, ವಿದೇಶಕ್ಕೆ ಕಳುಹಿಸಲು ಬೇಕಾದ ಕಷ್ಟಕರವಾದ ಕಾಗದದ ಕೆಲಸಗಳನ್ನು ಪೂರ್ಣಗೊಳಿಸುವುದು ಮತ್ತು ಬೆಳೆಯ ಗುಣಮಟ್ಟವನ್ನು ಪರೀಕ್ಷಿಸುವುದರಲ್ಲಿ ನಾವು ನಿಮ್ಮ ಜೊತೆಗಿರುತ್ತೇವೆ. ವಿದೇಶಿ ಮಾರುಕಟ್ಟೆಯ ನಿಯಮಗಳಿಗೆ ತಕ್ಕಂತೆ ನಿಮ್ಮನ್ನು ಸಿದ್ಧಪಡಿಸಿ, ಜಗತ್ತಿನಾದ್ಯಂತ ನಿಮ್ಮ ಸಂಘದ ಬಗ್ಗೆ ನಂಬಿಕೆ ಮೂಡಿಸುತ್ತೇವೆ.

ಪ್ರಾರಂಭಿಸುವುದು ಹೇಗೆ?

ಹೆಚ್ಚಿನ ಕೆಲಸ ನಮ್ಮದು! ನೀವು ಆರಾಮವಾಗಿರಿ, ನಿಮ್ಮ ಸಂಘದ ಡಿಜಿಟಲ್ ವೇದಿಕೆ ಸಿದ್ಧವಾಗುವುದನ್ನು ನೋಡಿ ಆನಂದಿಸಿ!

ನಮ್ಮ ಸರಳವಾದ ಆನ್‌ಲೈನ್ ಅರ್ಜಿಯ ಮೂಲಕ ನಿಮ್ಮ ಆಸಕ್ತಿಯನ್ನು ನಮಗೆ ತಿಳಿಸಿ.

ನಮ್ಮ ತಂಡವು ನಿಮ್ಮ ವಿವರಗಳನ್ನು ಪರಿಶೀಲಿಸಿ, ನಿಮ್ಮ ಸಂಘವನ್ನು ನಮ್ಮ ಜಾಲಕ್ಕೆ ಸೇರಿಸಿಕೊಳ್ಳಲು ಅನುಮತಿ ನೀಡುತ್ತದೆ.

ನಿಮ್ಮ FPO ನ ಇತಿಹಾಸ ಮತ್ತು ನೀವು ಯಾವ ಯಾವ ಬೆಳೆಗಳನ್ನು ಮಾರಾಟ ಮಾಡಲು ಬಯಸುತ್ತೀರಿ ಎಂಬ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ನಿಮಗಾಗಿ ಪ್ರತ್ಯೇಕ ವೆಬ್‌ಸೈಟ್ ಮತ್ತು ಆನ್‌ಲೈನ್ ಅಂಗಡಿಯನ್ನು (E-commerce Catalog) ನಾವೇ ಸಿದ್ಧಪಡಿಸುತ್ತೇವೆ. ಇದಕ್ಕೆ ನೀವು ಯಾವುದೇ ಶ್ರಮ ಪಡುವ ಅಗತ್ಯವಿಲ್ಲ.

ನಿಮ್ಮ ಹೊಸ ಡಿಜಿಟಲ್ ಆಫೀಸನ್ನು ಬಳಸಲು ಬೇಕಾದ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಅನ್ನು (Login ID) ನಾವು ನಿಮಗೆ ನೀಡುತ್ತೇವೆ.

ನಿಮ್ಮ ಹೊಸ ಆನ್‌ಲೈನ್ ಅಂಗಡಿಯನ್ನು ಒಮ್ಮೆ ನೋಡಿ. ಅದರಲ್ಲಿ ನಿಮಗೆ ಏನಾದರೂ ಬದಲಾವಣೆಗಳು ಬೇಕಿದ್ದರೆ ನಾವು ಮಾಡಿಕೊಡುತ್ತೇವೆ.

ಈಗ ನಿಮ್ಮ ಮಾರುಕಟ್ಟೆ ಸಿದ್ಧವಾಗಿದೆ! ಇಂದೇ ವ್ಯಾಪಾರ ಶುರು ಮಾಡಿ ಮತ್ತು ನೇರವಾಗಿ ಆರ್ಡರ್‌ಗಳನ್ನು ಪಡೆಯಿರಿ.

ಸಂಘದ ಸದಸ್ಯರ ಪಟ್ಟಿ, ಗೋದಾಮಿನ ದಾಸ್ತಾನು ಮತ್ತು ಹಣಕಾಸಿನ ಲೆಕ್ಕಾಚಾರವನ್ನು ಡಿಜಿಟಲ್ ಆಗಿ ನಿರ್ವಹಿಸಲು ನಮ್ಮ ವಿಶೇಷ ಸಾಧನಗಳನ್ನು (ERP) ಬಳಸಲು ಪ್ರಾರಂಭಿಸಿ.


ಇಂದೇ ನೊಂದಾಯಿಸಿ 

✽  ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಶಕ್ತಿ

ನಿಮ್ಮ FPO ಭವಿಷ್ಯಕ್ಕಾಗಿ ಸರಳವಾದ ದರಗಳು

ಹಂತ 1

ವ್ಯಾಪಾರ ವೇದಿಕೆ

ಆನ್‌ಲೈನ್‌ನಲ್ಲಿ ನಿಮ್ಮ ಬೆಳೆಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಬೇಕಾದ ಎಲ್ಲವೂ ಇಲ್ಲಿದೆ!

₹ 2,008/-

+ 18% GST

ವಾರ್ಷಿಕ ಚಂದಾ (ಒಂದು FPO ಗೆ)

ನೀವು ಪಡೆಯುವ ಸೌಲಭ್ಯಗಳು:

 ದೇಶಾದ್ಯಂತ ಮಾರುಕಟ್ಟೆ ಸೌಲಭ್ಯ: ನಿಮ್ಮಲ್ಲಿರುವ ಹೆಚ್ಚಿನ ಪ್ರಮಾಣದ ಬೆಳೆಗಳನ್ನು (ಧಾನ್ಯಗಳು, ಬೇಳೆಕಾಳುಗಳು, ಮಸಾಲೆ ಪದಾರ್ಥಗಳು) ಪಟ್ಟಿಗೆ ಸೇರಿಸಿ. ಇದರಿಂದ ಭಾರತದಾದ್ಯಂತ ಇರುವ ದೊಡ್ಡ ವ್ಯಾಪಾರಿಗಳಿಂದ ನೇರವಾದ ಬೆಲೆಗಳನ್ನು ಪಡೆಯಬಹುದು.

 ಸುಲಭ ವ್ಯಾಪಾರ ನಿರ್ವಹಣೆ: ನೀವು ಯಾವ ಬೆಳೆಗಳನ್ನು ಪಟ್ಟಿಗೆ ಸೇರಿಸಿದ್ದೀರಿ, ಎಷ್ಟು ಗ್ರಾಹಕರು ವಿಚಾರಿಸಿದ್ದಾರೆ ಮತ್ತು ಎಷ್ಟು ವ್ಯಾಪಾರ ಮುಗಿದಿದೆ ಎಂಬ ಮಾಹಿತಿಯನ್ನು ನೋಡಲು ಒಂದು ಸರಳ ವ್ಯವಸ್ಥೆ.

 ಡಿಜಿಟಲ್ ಗುರುತಿನ ಸೌಲಭ್ಯ

₹ 3,000/-

+ 18% GST

ಒಂದು ಬಾರಿ ಮಾತ್ರ ಪಾವತಿಸಬೇಕಾದ ನಿಗದಿತ ಶುಲ್ಕ

ನೀವು ಪಡೆಯುವ ಸೌಲಭ್ಯಗಳು:

 ನಿಮ್ಮದೇ ಡಿಜಿಟಲ್ ವಿಳಾಸ: ನಿಮ್ಮ FPO ಹೆಸರಿನಲ್ಲೇ ಒಂದು ವೆಬ್‌ಸೈಟ್ ವಿಳಾಸ (ಉದಾಹರಣೆಗೆ: yourfpo.nafdec.com). ಇದನ್ನು ನಿಮ್ಮ ವಿಸಿಟಿಂಗ್ ಕಾರ್ಡ್ ಮತ್ತು ಅಧಿಕೃತ ಪತ್ರಗಳಲ್ಲಿ ಬಳಸಬಹುದು.

 ಅಚ್ಚುಕಟ್ಟಾದ 5-ಪುಟಗಳ ವೆಬ್‌ಸೈಟ್: ನಿಮ್ಮ ಸಂಘದ ಪರಿಚಯ, ಆಡಳಿತ ಮಂಡಳಿಯ ವಿವರಗಳು ಮತ್ತು ನಿಮ್ಮ ರೈತರ ಸಾಧನೆಯ ಕಥೆಗಳನ್ನು ಪ್ರಕಟಿಸಲು ಪ್ರತ್ಯೇಕ ವೆಬ್‌ಸೈಟ್.

ಹಂತ 2

ಅಚ್ಚುಕಟ್ಟಾದ ಆಫೀಸ್

ನಿಮ್ಮ ಸಂಘದ ಬೆಳವಣಿಗೆ ಮತ್ತು ನಿಯಮಗಳ ಪಾಲನೆಯನ್ನು ನಿರ್ವಹಿಸುವ ಶಕ್ತಿಶಾಲಿ ವ್ಯವಸ್ಥೆ.

ನೀವು ಪಡೆಯುವ ಸೌಲಭ್ಯಗಳು:

 ಸ್ವಯಂಚಾಲಿತ ಲೆಕ್ಕಪತ್ರ (Automated Bookkeeping): ಇನ್ನು ಮುಂದೆ ಕೈಬರಹದ ರಿಜಿಸ್ಟರ್‌ಗಳ ಅಗತ್ಯವಿಲ್ಲ; ನಿಮ್ಮ ಸಂಘದ ಪ್ರತಿಯೊಂದು ರೂಪಾಯಿಯ ಆದಾಯ ಮತ್ತು ಖರ್ಚಿನ ಲೆಕ್ಕವನ್ನು ಡಿಜಿಟಲ್ ರೂಪದಲ್ಲಿ ಇರಿಸಿಕೊಳ್ಳಿ.

 ಜಿ.ಎಸ್.ಟಿ (GST) ಬಿಲ್ ಸೌಲಭ್ಯ: ಕಾರ್ಪೊರೇಟ್ ವ್ಯಾಪಾರಿಗಳು ಮತ್ತು ತೆರಿಗೆ ಇಲಾಖೆಯ ನಿಯಮಗಳಿಗೆ ತಕ್ಕಂತೆ, ನಿಮ್ಮ ಸಂಘದ ಹೆಸರಿನಲ್ಲೇ ಅಚ್ಚುಕಟ್ಟಾದ ಬಿಲ್‌ಗಳನ್ನು ತಯಾರಿಸಿ.

 ದಾಸ್ತಾನು ನಿರ್ವಹಣೆ (Smart Inventory): ನಿಮ್ಮ ಗೋದಾಮಿಗೆ ಎಷ್ಟು ಮಾಲು ಬಂದಿದೆ ಮತ್ತು ಎಷ್ಟು ಹೊರಹೋಗಿದೆ ಎಂಬ ಮಾಹಿತಿಯನ್ನು ಕ್ಷಣಕ್ಷಣಕ್ಕೂ ತಿಳಿದುಕೊಳ್ಳಿ.

 ತಪಾಸಣೆಗೆ ಸಿದ್ಧವಿರುವ ವರದಿಗಳು (Audit-Ready): ಬ್ಯಾಂಕ್ ಸಾಲ ಪಡೆಯಲು ಅಥವಾ ಸರ್ಕಾರಿ ತಪಾಸಣೆಗೆ ಬೇಕಾದ ಆರ್ಥಿಕ ವರದಿಗಳನ್ನು ಕೇವಲ ಒಂದು 'ಕ್ಲಿಕ್' ಮೂಲಕ ಸುಲಭವಾಗಿ ಪಡೆಯಿರಿ.

 ಮತ್ತು ಇನ್ನೂ ಹೆಚ್ಚಿನ ಸೌಲಭ್ಯಗಳು...







ನಿಮ್ಮ ಅಗತ್ಯಕ್ಕೆ ತಕ್ಕಂತೆ ನಮ್ಯವಾದ ದರಗಳು

ಹಂತ 3

ರೈತ ಸಂಪರ್ಕ ವೇದಿಕೆ

ನಿಮ್ಮ ರೈತರನ್ನು ಡಿಜಿಟಲ್ ವ್ಯವಸ್ಥೆಯ ಮುಖ್ಯವಾಹಿನಿಗೆ ತರಲು ಅತ್ಯಾಧುನಿಕ ಸಾಧನಗಳು.

₹ 79/-

+ 18% GST

ಪ್ರತಿ ರೈತನಿಗೆ, ಪ್ರತಿ ತಿಂಗಳಿಗೆ

ನೀವು ಪಡೆಯುವ ಸೌಲಭ್ಯಗಳು:

 ಪ್ರತಿ ರೈತರಿಗೂ ಪ್ರತ್ಯೇಕ ಲಾಗಿನ್: ಪ್ರತಿಯೊಬ್ಬ ಸದಸ್ಯರಿಗೂ ಮೊಬೈಲ್ ಅಪ್ಲಿಕೇಶನ್ ಸಿಗುತ್ತದೆ. ಇದರ ಮೂಲಕ ಎಲ್ಲಾ ಮಾಹಿತಿಗಳನ್ನು ನೇರವಾಗಿ ತಮ್ಮ ಫೋನ್‌ನಲ್ಲೇ ಪಡೆಯಬಹುದು.

 ನೇರ ಮಾಹಿತಿ ಸಂವಹನ: ಹವಾಮಾನ ವರದಿ, ಬಿತ್ತನೆ ಸಲಹೆ ಅಥವಾ ಬೆಳೆ ಸಂಗ್ರಹಣೆಯ ಸಮಯದ ಬಗ್ಗೆ ರೈತರಿಗೆ ತಕ್ಷಣವೇ ಮೊಬೈಲ್ ಆಪ್ ಮೂಲಕ ಮಾಹಿತಿ ಕಳುಹಿಸಿ.

 ಪಾರದರ್ಶಕ ಮಾಹಿತಿ ಸಂಗ್ರಹ: ಪ್ರತಿ ರೈತರ ಜಮೀನಿನ ವಿಸ್ತೀರ್ಣ, ಬೆಳೆಯ ವಿಧ ಮತ್ತು ನಿರೀಕ್ಷಿತ ಇಳುವರಿಯನ್ನು ಡಿಜಿಟಲ್ ಆಗಿ ದಾಖಲಿಸಿ. ಇದರಿಂದ ನಿಮ್ಮ ಮಾರಾಟವನ್ನು ಮೊದಲೇ ಸರಿಯಾಗಿ ಯೋಜಿಸಬಹುದು.

 ಬೆಳೆಯ ಗುರುತಿನ ಚೀಟಿ (Blockchain Traceability): ನಿಮ್ಮ ಪ್ರತಿಯೊಂದು ಬೆಳೆಯ ಚೀಲಕ್ಕೂ ಡಿಜಿಟಲ್ 'ಟ್ಯಾಗ್' ಇರುತ್ತದೆ. ಇದು ವಿದೇಶಿ ರಫ್ತು ಮಾರುಕಟ್ಟೆಗೆ ಬೇಕಾದ "ಬೆಳೆಯ ಮೂಲದ ಪುರಾವೆ"ಯನ್ನು ಒದಗಿಸುತ್ತದೆ.

 ಹೆಚ್ಚಿನ ನಂಬಿಕೆ: ರೈತರು ತಮ್ಮ ವ್ಯವಹಾರ ಮತ್ತು ಹಳೆಯ ಲೆಕ್ಕಾಚಾರಗಳನ್ನು ತಾವೇ ನೋಡಬಹುದು. ಇದರಿಂದ ಅವರಿಗೆ ನಿಮ್ಮ ಸಂಘದ ಮೇಲೆ ಹೆಚ್ಚಿನ ನಂಬಿಕೆ ಮತ್ತು ನಿಷ್ಠೆ ಬೆಳೆಯುತ್ತದೆ.